ನಿಮಗೆ ಸ್ವಾಗತ ಬಯಸುವ ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಅಪರೇಟಿವ್ ಲಿ.

 
 
       
 

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನ ಉತ್ತರ ಭಾಗದಲ್ಲಿ ಪಂಚ ನದಿಗಳು ಹರಿದು ಪಶ್ಚಿಮದ ಅರಬ್ಬೀ ಸಮುದ್ರವನ್ನು ಸೇರುವ ಪ್ರಕೃತಿ ರಮಣೀಯವಾದ ಊರು ಪಂಚಗಂಗಾವಳಿ ಅಥವಾ ಗಂಗೊಳ್ಳಿ. ಸುಮಾರು 13,000 ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈ ಪುಟ್ಟ ಗ್ರಾಮ ಪ್ರತಿಷ್ಟಿತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 18 ಪೇಟೆಗಳಲ್ಲಿ ಒಂದು ಎಂದೆನಿಸಿದೆ. ಹಿಂದೆ ಗೋವಾದಲ್ಲಿ ನೆಲೆನಿಂತ ಗೌಡ ಸಾರಸ್ವತ ಬ್ರಾಹ್ಮಣರು ಅನೇಕ ಕಾರಣಗಳಿಂದ ಜೀವನೋಪಾಯಕ್ಕಾಗಿ ಕರಾವಳಿ ಕರ್ನಾಟಕದ ಆಶ್ರಯ ಪಡೆದದ್ದು ಇತಿಹಾಸ. ಏಂತಹಾ ಆಪತ್ಕಾಲದಲ್ಲಿಯೂ ದೇವರು ಹಾಗೂ ಧರ್ಮವನ್ನು ಬಿಡದೆ ಗೌರವದಿಂದ ಜೀವನವನ್ನು ನಡೆಸುತ್ತಾ ಆರ್ಥಿಕ, ಸಾಮಾಜಿಕ, ಸಾಂಸ್ಕ್ರತಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಹಿರಿಮೆ ಜಿ.ಎಸ್.ಬಿ. ಸಮಾಜದ್ದು.

ಗಂಗೊಳ್ಳಿಯ ಜನತೆಗೆ ಈ ಜಿ.ಎಸ್.ಬಿ.ಸಮಾಜ ನೀಡಿದ ಅನನ್ಯ ಕೊಡುಗೆಗಳಲ್ಲೊಂದು ಗಂಗೊಳ್ಳಿ ಕೋ-ಆಪರೇಟಿವ ಟೌನ್ ಬ್ಯಾಂಕ್.

ಕಡಲ ತೀರದ ಪರಶುರಾಮಕ್ಷೇತ್ರ ಗಂಗೊಳ್ಳಿಯ ಭೀಷ್ಮ ದಿವಂಗತ ಏಚ್. ಲಕ್ಷ್ಮೀನಾರಾಯಣ ಕಾಮತರ ಪಡಸಾಲೆಯಲ್ಲಿ 22/11/1920 ರಂದು ನಡೆದ ಸಹಕಾರಿಗಳ ಸಭೆಯಲ್ಲಿ ಜನಿಸಿದ ಈ ಸಂಸ್ಠೆ ಜಿ.ಎಸ್.ಬಿ.ಸಮಾಜದ ಆರ್ಥಿಕ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.

........ ಮುಂದಕ್ಕೆ

 
         
   

  visitors estimator

   
 
 

Copyright@ 2013 Ganguli Town Souharda Co-op Ltd, Ganguli.  All rights reserved. Designed@Maldives Computers